Posts

SmallCompositionClassical

 raaga - Vrindavana Saaranga ರಿ ಪ ಮ ರೀ ಸ ನಿ ಸ  |    ರಿ ಮ ಪ ಮ ಪ ನಿ ಪ ಮ   || ಕ ಮ ಲ ನಾ ಭ ನ ನು  |  ಅ ನು ದಿ ನ  ಸೇ ವಿ ಸು ತ   || ಪ ಸ ನಿ ಸಾ ನಿ ಪ ಮ |     ಪ ನಿ ಸ ರೀ ಸ ನಿ ಪ ||  ಕ ಮ ಲ ದಾ ಸು ಮ ದಿ | ಕ ಮ ಲೆ ನೀ ಕು ಳಿ ತು || ಪ ರಿ ಸ ರಿ ನಿ  ಸ  ಪ ನಿ   |   ಮ ಪ ರಿ ಮ ರಿ ಸ ನಿ ಸ || ಕ ಮ ಲ ವ ಕ ರ ದ ಲಿ   |  ಹಿ ಡಿ ದು ಮೆ ರೆ ದ ವ ಳೆ || ಮ ಮ ಮ ಪ ನಿ ಪ ನಿ ನಿ |  ನಿ ಸಾ ಸ ರಿ ನಿ ಸ  || ಜಾ ನ ಕಿ ಯಾ ಗಿ ಶ್ರೀ  |        ರಾ ಮ ನ ವ ರಿ  ಸು ತ  || ನಿ ಸ ರಿ ಮ ರಿ ಸ ನಿ ಸ |   ನಿ ಸಾ ರಿ ಸ ನಿ ಪಾ    || ರು ಕ್ಮಿಣಿ ಯಾ ಗಿ ಶ್ರೀ |  ಕೃಷ್ಣಗೊಲಿದಿರುವೆ   || ಸ ನಿ ಸ ನಿ ಪ ಮ ಪ  ಮ  | ಮ ರಿ ಮ ರಿ ರಿ ಸ ನಿ ಸ || ಭಕುತರ ಹ್ರದಯ ಕ | ಮಲದಿ ನೆಲೆಸಿರುವೆ || ನೀ ಸ ಸ ರೀ ಸ ಸ ಮಾ ರಿ ರಿ ನೀ ಸ ಸ || ಸೀತೆಯೇ ಮಾತೆಯೇ ಲಕ್ಷುಮಿಯೇ ಹರಿಪ್ರಿಯೆ || ಕಮಲನಾಭನನು ||

ಮಳೆ

  ಮಳೆ ಬೀಳು ಬೀಳು ಮಳೆಯೇ ಬೀಳು ಬೀಳು ಮಳೆ ದಾಹದಿಂದ ನಿನಗಾಗಿ ಕಾಯುತಿಹುದು ಇಳೆ ಎಲ್ಲ ಕಡೆಯು ಬಿದ್ದಿರಲು ರಾಶಿ ರಾಶಿ ಕೊಳೆ ಅಮೃತದಂಥ ನೀರಿನಿಂದ ನೀನು ಅದನು ತೊಳೆ   ಸುರಿಯೆ ಸುರಿಯೆ ಮಳೆಯೇ ಮತ್ತೆ ಮತ್ತೆ ಸುರಿ ನೀನು ಸುರಿಯುವಾಗ ತಾನೆ ತುಂಬುವುದು ಝರಿ ಝರಿಯ ನೀರು ಕುಡಿದು ತಾನೆ ಜೀವ ಮೊಟ್ಟೆ ಮರಿ ಆಗ ತಾನೆ ತಿರುಗುವುದು ಸೃಷ್ಟಿ ಚಕ್ರ ಸರಿ   ಬಾರೇ ಬಾರೇ ಮಳೆಯೇ ಬರಲಿ ನಿನ್ನ ನೀರು ನಿನ್ನ ನೀರಿನಿಂದ ತಾನೆ ಬುವಿಯ ಸೆರಗು ಹಸಿರು ಆ ಹಸಿರಿನಿಂದ ತಾನೆ ಜೀವಕೆಲ್ಲ ಉಸಿರು ಇದೆಲ್ಲ ಸೇರಿದರೇ ಅದಕೆ ಸೃಷ್ಟಿ ಎಂದು ಹೆಸರು   ಗಗನದಿಂದ ಕೆಳಗಿಳಿದು ಮೋಡಗಳಿಂದ ಹೊರಗೆ ಹರಿದು ತಣ್ಣಗಾದ ನೀರ ಸುರಿದು ಬೆಂದ ಜೀವ ಮತ್ತೆ ತೊಯ್ದು ಧಗಧಗಿಸುವ ವಿಶ್ವವೆಲ್ಲ ತಣ್ಣಗಾಗಲಿ ಶಾಂತಿಯಿಂದ ಮನದಲ್ಲಿ ಹರಿಯ ಹುಡುಕಲಿ ವಿಶ್ವ ಹರಿಯ ಹುಡುಕಲಿ